Jul 8, 2014

ಕೊಡೆ ಕೊಡುಗೆ


              
  “ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳನ್ನು ಸಂಗ್ರಹಿಸುವುದು ಕಷ್ಟಕರ ಕೆಲಸ. ಮಳೆಗಾಲದ ದಿನಗಳಲ್ಲಿ ಶಾಲೆಯ ದಾರಿಯೂ ಹೆಚ್ಚು ಕಠಿಣವಾಗಿರುತ್ತದೆ. ನಾವು ವಿದ್ಯಾರ್ಥಿಗಳನ್ನು ವಿವಿಧ ರೀತಿಗಳಿಂದ ಪ್ರೋತ್ಸಾಹಿಸಬೇಕಾಗಿದೆ. ನಿಟ್ಟಿನಲ್ಲಿ ಕೇರಳ ಗ್ರಾಮೀಣ ಬ್ಯಾಂಕ್ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೊಡೆಯನ್ನು ವಿತರಿಸುವ ಪ್ರಯತ್ನ ಮಾಡುತ್ತಿದೆಎಂದು ಕೇರಳ ಗ್ರಾಮೀಣ ಬ್ಯಾಂಕ್ ರೀಜನಲ್ ಮೇನೇಜರ್ ಡಿ.ದಾಮೋದರ ಅಭಿಪ್ರಾಯಪಟ್ಟರು. ಅವರು 27.06.2014 ಶುಕ್ರವಾರ ನಮ್ಮ್ ವಿದ್ಯಾಪೀಠದಲ್ಲಿ ಜರಗಿದ ಕೊಡೆ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
 
ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ. ಚಂದ್ರಶೇಖರ ಭಟ್ ಬೆಜಪ್ಪೆ, ಕೇರಳ ಗ್ರಾಮೀಣ ಬ್ಯಾಂಕ್ ಕುಂಬಳೆ ಶಾಖೆಯ ವ್ಯವಸ್ಥಾಪಕ ಉದನೇಶ್ವರ ಪ್ರಸಾದ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸ್ಮಿತಾ ಸ್ವಾಗತಿಸಿ ವಿದ್ಯಾಲಕ್ಷ್ಮಿ ವಂದಿಸಿದರು. ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment