Jun 1, 2016

ಶಾಲಾ ಪ್ರವೇಶೋತ್ಸವ – 2016




ನೂತನ ಅಧ್ಯಯನ ವರ್ಷದ ಆರಂಭವು ಇಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿದವು. ಹೊಸ ಕನಸುಗಳೊಂದಿಗೆ ಮುಜುಂಗಾವಿನ ಪ್ರಶಾಂತ ಪರಿಸರದಲ್ಲಿ ವಿದ್ಯಾರ್ಜನೆಗೆ ಆಗಮಿಸಿದ ಪುಟಾಣಿಗಳನ್ನು ಬಲೂನು ಮತ್ತು ಸಿಹಿ ತಿಂಡಿಗಳನ್ನು ನೀಡಿ ಸ್ವಾಗತಿಸಲಾಯಿತು. ನಮ್ಮ ಸಂಭ್ರಮದ ಜೊತೆಗೆ ಕಾಸರಗೋಡಿನಲ್ಲಿ ಲೆಕ್ಕ ಪರಿಶೋಧಕರಾಗಿರುವ ಶಿವಶಂಕರ ಭಟ್ ಕೋಡಿಮೂಲೆ ಸಹಕರಿಸಿದರು. ಎಸ್.ಎಸ್.ಎಲ್.ಸಿ ಯಲ್ಲಿ ಆರ್ಥಿಕವಾಗಿ ಹಿಂದಿರುವ ವಿದ್ಯಾರ್ಥಿಗಳಿಗೆ ದಾನಿಗಳ ಸಹಾಯದಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಸಹಾಯ ಧನವನ್ನು ವಿತರಿಸಲಾಯಿತು.
ಶಾಲಾ ಸಮಿತಿಯ ಅಧ್ಯಕ್ಷ ಶಂಕರನಾರಾಯಣ ರಾವ್ ಮುನ್ನಿಪ್ಪಾಡಿ ಸಭೆಯ ಅಧ್ಯಕ್ಷತೆ ವಹಿಸಿದರು. ಶಾಲಾ ಸಮಿತಿಯ ಶ್ರೀಕೃಷ್ಣ ಪ್ರಸಾದ್ ಕಾವೇರಿಕಾನ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ-ಮಾರ್ಗ, ಮುಖ್ಯ ಶಿಕ್ಷಕಿ ಚಿತ್ರಾ ಸರಸ್ವತಿ ಪೆರಡಾನ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೃಷ್ಟಿಕ್ ಮಯ್ಯ ಸ್ವಾಗತಿಸಿ, ಆಶ್ರಿತ್ ನಾರಾಯಣ ವಂದಿಸಿದರು. ಕಿಶೋರಕೃಷ್ಣ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.



May 4, 2016

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ

2016 ಮಾರ್ಚ್ ತಿಂಗಳಿನಲ್ಲಿ ಜರಗಿದ ಕೇರಳ ರಾಜ್ಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ ದಾಖಲಿಸಿದ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು.

Apr 1, 2016

‘ಪ್ರತಿಭಾ ಭಾರತೀ’



“ಪ್ರತಿಭಾ ಪ್ರದರ್ಶನದಿಂದ ವಿದ್ಯಾರ್ಥಿಗಳು ಹಿಂಜರಿಯಬಾರದು. ಅಧ್ಯಯನಕ್ಕೆ ಸಹಕಾರಿಯಾಗುವ ಗ್ರಂಥಾಲಯಗಳನ್ನು ಗರಿಷ್ಠ ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಪ್ರತಿಭೆಯ ಪ್ರಕಟಣೆಗೆ ಅಗತ್ಯವಾದ ತಯಾರಿಗಳನ್ನು ಮಾಡಿಕೊಳ್ಳಬೇಕು. ಪ್ರತಿಭಾ ಪ್ರದರ್ಶನಗಳಲ್ಲಿ ಭಾಗವಹಿಸುವ ಮೂಲಕ ಸಭಾಕಂಪನವನ್ನು ಹೋಗಲಾಡಿಸಿಕೊಳ್ಳಬೇಕು.” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಅಡ್ಕ ಸುಬ್ರಹ್ಮಣ್ಯ ಭಟ್ ಅಭಿಪ್ರಾಯಪಟ್ಟರು. ಅವರು ನಿನ್ನೆ 31.03.2016 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಅಧ್ಯಯನ ವರ್ಷದ ಕೊನೆಯ ’ಪ್ರತಿಭಾ ಭಾರತೀ’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಕುಂಬಳೆಯ ದಂತವೈದ್ಯೆ ಡಾ|ಸುಭಾಷಿಣಿ ವಿದ್ಯಾರ್ಥಿಗಳಿಗೆ ದಂತ ಸ್ವಚ್ಚತೆಯ ಅಗತ್ಯ ಮತ್ತು ಶುಶ್ರೂಷೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿ ಶ್ರಾವ್ಯಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶಾಲಾ ಸಮಿತಿಯ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಮುಖ್ಯಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ, ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ಕಂದ ಮುರಳಿ ಸ್ವಾಗತಿಸಿ ಆದಿತ್ಯ ವಂದಿಸಿದರು. ಜಯಶ್ರೀ ಮತ್ತು ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

‘ಸ್ಪಂದನ 2016’



“ಸಂಸ್ಕಾರವಂತ ವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗಳು ಭಾಗ್ಯವಂತರು. ಉಳಿದೆಡೆ ದೊರಕದ ಸಂಸ್ಕೃತಿ, ಸಂಪ್ರದಾಯವನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳುತ್ತಿರುವುದು ಸಂತಸದ ವಿಚಾರ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಪರೋಪಕಾರ, ಸನ್ನಡತೆ, ಪರಸ್ಪರ ವಿಶ್ವಾಸದ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಸೂಕ್ತ ಸಂದರ್ಭದಲ್ಲಿ ಮಕ್ಕಳಿಗೆ ಬುದ್ಧಿಮಾತುಗಳನ್ನು ಹೇಳದಿದ್ದರೆ ತಾಯಿ ತಂದೆಯರು ಶತ್ರುಗಳಾಗಬಲ್ಲರು. ಆದ್ದರಿಂದ ಸಂಸ್ಕಾರಯುತ ಶಿಕ್ಷಣ ಕಾಲದ ಅಗತ್ಯವಾಗಿದೆ. ಇಲ್ಲಿ ಬೆಳಗಿದ ದೀಪ ಸರ್ವತ್ರ ಪಸರಿಸಲಿ.” ಎಂದು ಮಂಜೇಶ್ವರದ ಶ್ರೀ ಅನಂತೇಶ್ವರ ದೇವಳ ಪ್ರೌಢಶಾಲೆಯ  ನಿವೃತ್ತ ಮುಖ್ಯೋಪಾಧ್ಯಾಯ ಉದಯಶಂಕರ ಭಟ್ ಮುಂಡಕಾನ ಅಭಿಪ್ರಾಯಪಟ್ಟರು. ಅವರು ಮೊನ್ನೆ 30.03.2016 ಬುಧವಾರ ನಮ್ಮ ವಿದ್ಯಾಪೀಠದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ವಿದಾಯ ಸಮಾರಂಭ ’ಸ್ಪಂದನ 2016’ ಕಾರ್ಯಕ್ರಮದಲ್ಲಿ ಜ್ಞಾನದ ಸಂಕೇತವಾಗಿ ಪ್ರಜ್ವಲಿಸುತ್ತಿರುವ ದೀಪವನ್ನು ವಿದ್ಯಾರ್ಥಿಗಳಿಗೆ ನೀಡಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಅಧ್ಯಕ್ಷ ಶಂಕರನಾರಾಯಣ ರಾವ್ ಮುನ್ನಿಪ್ಪಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಳ್ಳೇರಿಯಾ ಮಂಡಲ ವಿದ್ಯಾಪ್ರಧಾನರಾದ ಬಾಲಕೃಷ್ಣ ಶರ್ಮ ಅನಂತಪುರ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶಾಲಾ ಸಮಿತಿಯ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಕೋಶಾಧಿಕಾರಿ ಕೆ.ವೆಂಕಟ್ರಮಣ ಭಟ್ ಸೂರಂಬೈಲು, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಮುಖ್ಯಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ, ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೃಷ್ಟಿಕ್ ಸ್ವಾಗತಿಸಿ ಆಶ್ರಿತ್ ವಂದಿಸಿದರು.

ವಿದ್ಯಾಪೀಠಕ್ಕೆ ಮಾಣಿಲ ಶ್ರೀ ಸ್ವಾಮೀಜಿ ಭೇಟಿ


ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು 28.03.2016 ಸೋಮವಾರ ನಮ್ಮ ವಿದ್ಯಾಪೀಠಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಶಾಲಾ ಸಮಿತಿಯ ಉಪಾಧ್ಯಕ್ಷ ಶ್ರೀಕೃಷ್ಣಪ್ರಸಾದ್ ಕಾವೇರಿಕಾನ, ಶಾಲಾ ಸಮಿತಿಯ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಮುಖ್ಯಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ ಉಪಸ್ಥಿತರಿದ್ದರು.

Mar 19, 2016

ನೂತನ ಸಮಿತಿ


ವಿದ್ಯಾಪೀಠಕ್ಕೆ ನೂತನ ಶಾಲಾ ಸಮಿತಿಯನ್ನು ರೂಪಿಸಲಾಗಿದೆ. 
ಅಧ್ಯಕ್ಷರು: ಎಸ್.ಎನ್.ರಾವ್ ಮುನ್ನಿಪ್ಪಾಡಿ
ಉಪಾಧ್ಯಕ್ಷರು: ಕೃಷ್ಣ ಪ್ರಸಾದ್ ಕಾವೇರಿಕಾನ, ಚಂದ್ರಶೇಖರ ಭಟ್ ಎಯ್ಯೂರು
ಕಾರ್ಯದರ್ಶಿ: ಡಿ.ಕೆ.ಶ್ಯಾಮರಾಜ್ ದೊಡ್ಡಮಾಣಿ
ಕೋಶಾಧಿಕಾರಿ: ಕೆ.ವೆಂಕಟ್ರಮಣ ಭಟ್ ಸೂರಂಬೈಲು

ಸದಸ್ಯರು:
ಸತ್ಯಶಂಕರ ಭಟ್ ಹಿಳ್ಳೆಮನೆ, ಸೂರ್ಯನಾರಾಯಣ ಭಟ್ ಬೊಳುಂಬು, ಬಾಲಕೃಷ್ಣ ಶರ್ಮ ಅನಂತಪುರ, ಸುಕುಮಾರ ಬೆಟ್ಟಂಪಾಡಿ, ನಾರಾಯಣ ಜಿ.ಹೆಗಡೆ, ಶ್ರೀಮತಿ ಪದ್ಮಾವತಿ ಡಿ.ಪಿ.ಭಟ್, ಶ್ರೀಮತಿ ರೂಪಶ್ರೀ ಕೋಡಿಮೂಲೆ, ಶ್ರೀಮತಿ ಪಾರ್ವತಿ ಪೆರಡಾನ.

ವಿಶೇಷ ಆಹ್ವಾನಿತರು:
ಬಿ.ಜಿ.ರಾಮ ಭಟ್ ಗೋಳಿತ್ತಡ್ಕ, ಶ್ರೀಕೃಷ್ಣ ಭಟ್ ಮೀನಗದ್ದೆ, ಜಯಪ್ರಕಾಶ್ ಪಜಿಲ, ಶ್ರೀಮತಿ ಶಾರದಾ ಜಯಗೋವಿಂದ.

ಎಲ್ಲರಿಗೂ ಶುಭ ಹಾರೈಕೆಗಳು...

Feb 10, 2016

ವರ್ಧಂತ್ಯುತ್ಸವ ಸಂಪನ್ನ





ಮಕ್ಕಳೆಂದರೆ ಪ್ರಕೃತಿಯ ಕೊಡುಗೆಅವರಲ್ಲಿ ಪುಟಿದೇಳುವ ಉತ್ಸಾಹ ಎಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆಶ್ರೀರಾಮಚಂದ್ರಾಪುರ ಮಠದ ಶಾಲೆಗಳಲ್ಲಿ ಅಂತಹ ಉತ್ಸಾಹವನ್ನುಬೆಳೆಸುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆವೇದ ಗಣಿತಕ್ಕೂ  ವಿದ್ಯಾಸಂಸ್ಥೆಗಳಲ್ಲಿ ತರಬೇತಿ ನೀಡಲಾಗುತ್ತಿದೆಮಕ್ಕಳ ಕನಸುಗಳಿಗೆ  ವಿದ್ಯಾಸಂಸ್ಥೆಗಳಲ್ಲಿ ರೂಪಕಲ್ಪನೆಯನ್ನು ನೀಡಲು ಪ್ರಯತ್ನಿಸಲಾಗುತ್ತಿದೆಮಕ್ಕಳು ಬಾಣದಂತೆಹೂಡುವವನಿಗೆ ಗುರಿಯನ್ನು ತಲಪಿಸುವ ಜವಾಬ್ದಾರಿಯೂ ಇದೆ" ಎಂದು ಶ್ರೀರಾಮಚಂದ್ರಾಪುರ ಮಠದ ವಿದ್ಯಾವಿಭಾಗದ ಕಾರ್ಯದರ್ಶಿ ಡಾ|ಶಾರದಾ ಜಯಗೋವಿಂದ ಅಭಿಪ್ರಾಯಪಟ್ಟರು.  ಅವರು 06.02.2016 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ನಡೆದ ವರ್ಧಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರುಅಭ್ಯಾಗತರಾಗಿ ಕುಂಬಳೆ ಗ್ರಾಮ   ಪಂಚಾಯತು ಸದಸ್ಯ ಹರೀಶ ಗಟ್ಟಿ ಕೋಟೆಕ್ಕಾರ್ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಕೈಲಾಸಮೂರ್ತಿಹೊಸದಿಗಂತ ಪತ್ರಿಕೆಯ ಮಂಗಳೂರು   ಆವೃತ್ತಿಯ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ   ಶ್ರೀಮತಿ ಸಂಧ್ಯಾ.ವಿ.ಶೆಟ್ಟಿರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯಶಾಲಾ ಸಮಿತಿಯ ಕೆ.ವೆಂಕಟ್ರಮಣ ಭಟ್ ಸೂರಂಬೈಲು   ಭಾಗವಹಿಸಿದರುಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರುಅಧ್ಯಯನ ವರ್ಷದ   ವರದಿಯನ್ನು ಪ್ರಮುಖ ಶಿಕ್ಷಕಿ ಚಿತ್ರಾ ಸರಸ್ವತಿ ಪೆರಡಾನ ವಾಚಿಸಿದರು.

ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ‘ಬೆಳಕು’ ಮತ್ತು ‘ಜ್ಞಾನದೀಪ್ತಿ’ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತುಶಾಲಾ ವಿದ್ಯಾರ್ಥಿಗಳಾದ   ಜಯಶ್ರೀ.ಎಂ.ಸಿ ಸ್ವಾಗತಿಸಿ,ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಭೆ-ಮಾರ್ಗ ವಂದಿಸಿದರುವಿದ್ಯಾರ್ಥಿನಿ ಅನನ್ಯ ಕಾರ್ಯಕ್ರಮ ನಿರೂಪಿಸಿದರು.

ದೀಪ ಪ್ರಜ್ವಲನೆಯೊಂದಿಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿಗಳಾದ ಹಸ್ಮುಖ್ ಪಟೇಲ್ ಮತ್ತು ಪ್ರಶಾಂತ ಪೈ   ನೆರವೇರಿಸಿದರುನಂತರ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಜರಗಿತು.

Jan 30, 2016

ಫೆಬ್ರವರಿ 6 ರಂದು ‘ವರ್ಧಂತ್ಯುತ್ಸವ’

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ನಮ್ಮ ವಿದ್ಯಾಪೀಠದ ವರ್ಧಂತ್ಯುತ್ಸವವು 06.02.2016ನೇ ಶನಿವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಗ್ಗೆ 9.30ಕ್ಕೆ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ದ್ವೀಪ ಪ್ರಜ್ವಲನೆ ನಡೆಸುವರು.
        ಅಪರಾಹ್ನ 3.00 ಗಂಟೆಯಿಂದ ಜರಗುವ ಸಮಾರೋಪ ಸಮಾರಂಭದಲ್ಲಿ ಶ್ರೀರಾಮಚಂದ್ರಾಪುರ ಮಠದ ವಿದ್ಯಾ ವಿಭಾಗದ ಕಾರ್ಯದರ್ಶಿ ಡಾ|ಶಾರದಾ ಜಯಗೋವಿಂದ, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ಕುಂಬಳೆ ಗ್ರಾಮ ಪಂಚಾಯತು ಸದಸ್ಯ ಹರೀಶ ಗಟ್ಟಿ ಕೋಟೆಕ್ಕಾರ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ.ಕೈಲಾಸಮೂರ್ತಿ, ಹೊಸದಿಗಂತ ಪತ್ರಿಕೆಯ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ.ವಿ.ಶೆಟ್ಟಿ ಪ್ರಮುಖ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

Jan 21, 2016

ಪ್ರತಿಭಾ ಭಾರತೀ - ಜನವರಿ 2016



      “ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರತಿಭಾ ಭಾರತಿಯು ಉತ್ತಮ ಕಾರ್ಯಕ್ರಮವಾಗಿದೆ. ಮಕ್ಕಳಲ್ಲಿ ಸಚ್ಚಾರಿತ್ರ್ಯದ ನಿರ್ಮಾಣವು ಕಾಲದ ಅಗತ್ಯವಾಗಿದೆ. ನಿಟ್ಟಿನಲ್ಲಿ ಶಿಕ್ಷಕರ ಪರಿಶ್ರಮ ಅತ್ಯಗತ್ಯ. ಹಿರಿಯರ ಕಷ್ಟಗಳನ್ನು ಅರಿತು ಅವರಿಗೆ ಸಹಾಯ ನೀಡಲು ಮಕ್ಕಳು ಪ್ರಯತ್ನಿಸಬೇಕು.” ಎಂದು ಕುಂಬಳೆ ಗ್ರಾಮ ಪಂಚಾಯತು ಸದಸ್ಯಮುರಳೀಧರ ಯಾದವ್ ನಾಯ್ಕಾಪು ಅಭಿಪ್ರಾಯಪಟ್ಟರು. ಅವರು 01.01.2016 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ನಡೆದ ಐದನೆಯ ಪ್ರತಿಭಾ ಭಾರತೀ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿನಿ ದೀಕ್ಷಾ.ಎಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರುಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯಶಾಲಾ ಸಮಿತಿಯ ಜೊತೆಕಾರ್ಯದರ್ಶಿ ಶ್ಯಾಮರಾಜ್ದೊಡ್ಡಮಾಣಿಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗಮುಖ್ಯಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನಸಂಸ್ಕೃತ ಶಿಕ್ಷಕ ಡಾ| ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರುಕುಂಬಳೆ ಗ್ರಾಮ ಪಂಚಾಯತು ಸದಸ್ಯರಾಗಿ ಆಯ್ಕೆಯಾದ ಮುರಳೀಧರ ಯಾದವ್ ಅವರನ್ನು ಗೌರವಿಸಲಾಯಿತುವಿದ್ಯಾರ್ಥಿಗಳಾದ ಲಿಖಿತ್ ಕುಮಾರ್ ಸ್ವಾಗತಿಸಿ ಲಕ್ಷ್ಮೀಶವಂದಿಸಿದರುಸುಹಾಸ್ ಮತ್ತು ಶ್ರೀಶಶ್ರೀ ಕಾರ್ಯಕ್ರಮ ನಿರೂಪಿಸಿದರು.