Aug 23, 2015

ಓಣಂ ಆಚರಣೆ 2015





“ಮಲಯಾಳ ನಾಡಿನಲ್ಲಿ ಮಾತ್ರ ಆಚರಿಸಲ್ಪಡುತ್ತಿದ ಓಣಂ ಇಂದು ರಾಜ್ಯದ ವ್ಯಪ್ತಿಯನ್ನು ಮೀರಿ ಆಚರಿಸಲ್ಪಡುತ್ತಿದೆ. ಜಾತಿ, ಮತ ಬೇಧವಿಲ್ಲದೆ ನಾಡಿನ ಹಬ್ಬವಾಗಿ ಜನರು ಓಣಂ ಹಬ್ಬವನ್ನು ಆಚರಿಸುತ್ತಿದ್ದಾರೆ. ಹಬ್ಬಗಳು ಜನರನ್ನು ಒಂದುಗೂಡಿಸುತ್ತವೆ. ಏಕತಾನತೆಯ ಬದುಕನ್ನು ಹೋಗಲಾಡಿಸಿ ಜೀವನದಲ್ಲಿ ಉತ್ಸಾಹ ಚಿಮ್ಮುವಂತೆ ಮಾಡುತ್ತದೆ” ಎಂದು ಸಹಕಾರ ಭಾರತೀ ಜಿಲ್ಲಾ ಕಾರ್ಯದರ್ಶಿ ಐತ್ತಪ್ಪ ಮವ್ವಾರು ಅಭಿಪ್ರಾಯಪಟ್ಟರು. ಅವರು ಮೊನ್ನೆ 21.08.2015 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಓಣಂ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾ ಸರಸ್ವತಿ, ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಶ್ರಿತ್ ಸ್ವಾಗತಿಸಿ ಸಂಯುಕ್ತಾ ವಂದಿಸಿದರು. ಕಿಶೋರ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Aug 19, 2015

ರಾಮಾಯಣ ಮಾಸಾಚರಣೆ




“ರಾಮಾಯಣ ಆದರ್ಶ ಕಥಾನಕ. ಅಲ್ಲಿನ ಸಹೋದರ ಪ್ರೇಮ, ಪಿತೃವಾಕ್ಯ ಪರಿಪಾಲನೆಯ ನಿದರ್ಶನಗಳು ಕಲಿಯುಗದಲ್ಲೂ ಔಚಿತ್ಯಪೂರ್ಣವಾದವುಗಳು. ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಈ ಸಂವತ್ಸರದ ರಾಮಾಯಣ ಮಾಸಾಚರಣೆಯೂ ಕೊನೆಗೊಳ್ಳುತ್ತಿರುವುದು ಯೋಗಾಯೋಗ. ಸ್ವಾತಂತ್ರ್ಯದ ಉಳಿವಿಗಾಗಿ ನಾವು ಕೈಗೊಳ್ಳುತ್ತಿರುವ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಸದಾಕಾಲ ಪ್ರಯತ್ನಿಸುತ್ತಿರಬೇಕು” ಎಂದು ನಿವೃತ್ತ ಉದ್ಯಮಿ ಶಂಕರನಾರಾಯಣ ಭಟ್ ಕೋಡಿಮೂಲೆ ಅಭಿಪ್ರಾಯಪಟ್ಟರು. ಅವರು ಕಳೆದ 15.08.2015 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ರಾಮಾಯಣ ಮಾಸಾಚರಣೆಯ ಸಮಾರೋಪ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಡನಾಡು ಕ್ಷೀರೋತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶಂಕರನಾರಾಯಣ ರಾವ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾ ಸರಸ್ವತಿ, ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀಶ ಸ್ವಾಗತಿಸಿ ಸೃಷ್ಟಿಕ್ ವಂದಿಸಿದರು. ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು.

Aug 3, 2015

ರಕ್ಷಕ ಶಿಕ್ಷಕ ಸಂಘದ ಸಭೆ


                ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು 01.08.2015 ಶನಿವಾರ ಜರಗಿತು. ಸಂದರ್ಭದಲ್ಲಿ ಪುರುಷೋತ್ತಮ ಆಚಾರ್ಯ ಮುಜುಂಗಾವು ಅಧ್ಯಕ್ಷರಾಗಿರುವ 2015-16ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಎಯ್ಯೂರು ಚಂದ್ರಶೇಖರ ಭಟ್, ಚಂದ್ರಶೇಖರ ಭಟ್ ಮಡ್ವ ಮತ್ತು ಶ್ರೀಮತಿ ಶೋಭನ ನಾಯ್ಕಾಪು ಇವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

                ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಪುರುಷೋತ್ತಮ ಭಟ್ ಕುಂಬಳೆ, ಶಶಿಧರ ಭಟ್ ಕುಂಬಳೆ, ಸುಬ್ರಾಯ ಹೇರಳ ಬಂದ್ಯೋಡು, ಕೃಷ್ಣನ್ ಮಾಯಿಪ್ಪಾಡಿ, ರಾಮಭಟ್ ಕಿದೂರು, ಶ್ರೀಮತಿ ವಿನಯಾ ಮುಂಡಕಾನ, ಶ್ರೀಮತಿ ಪದ್ಮಾವತಿ ಅನಂತಪುರ, ಶ್ರೀಮತಿ ಶೋಭಾ ನಾಯ್ಕಾಪು, ಶ್ರೀಮತಿ ಉಷಾ ಮಾಯಿಪ್ಪಾಡಿ, ಶ್ರೀಮತಿ ದೀಪಶ್ರೀ ದೊಡ್ಡಮಾಣಿ, ಶ್ರೀಮತಿ ಪಾರ್ವತಿ ಪೆರಡಾನ ಮತ್ತು ಶ್ರೀಮತಿ ಅರುಣಾದೇವಿ ಗೂಮೆಮೂಲೆ ಇವರನ್ನು ಆರಿಸಲಾಯಿತು.

Aug 2, 2015

ಗುರುಪೂರ್ಣಿಮಾ



ನಮ್ಮ ವಿದ್ಯಾಪೀಠದಲ್ಲಿ 31.07.2015 ಶುಕ್ರವಾರ ಗುರುಪೂರ್ಣಿಮೆ ಕಾರ್ಯಕ್ರಮವನ್ನು ವಿಶಿಷ್ಠವಾಗಿ ಆಚರಿಸಲಾಯಿತು. ಗ್ರಾಮಣಿ ಕೆ.ಎಸ್.ಶಂಕರ ಭಟ್ ಕಾವೇರಿಕಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್ ಕುಂಬಳೆ, ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾ ಸರಸ್ವತಿ ಪೆರಡಾನ, ಸಂಸ್ಕೃತ ಶಿಕ್ಷಕ ಡಾ|ಸದಾಶಿವ ಭಟ್.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಶ್ರೀಗುರು ಭಾವಚಿತ್ರಕ್ಕೆ ನಮಸ್ಕರಿಸಿ ಎಲ್ಲ ಹಿರಿಯರ ಆಶೀರ್ವಾದವನ್ನು ಬೇಡಿದರು.

Aug 1, 2015

‘ಪ್ರತಿಭಾ ಭಾರತೀ’ - ಜುಲೈ 2015


ಮನುಷ್ಯನು ತನ್ನ ಸಾಹಿತ್ಯ ಮತ್ತು ಬುದ್ಧಿವಂತಿಕೆಯ ಪ್ರದರ್ಶನದ ಮೂಲಕ ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿದ್ದಾನೆ. ಕಲಾಭಿರುಚಿಯನ್ನು ವ್ಯಕ್ತಪಡಿಸುವ ಮೂಲಕ ಆತ ಪರಿಪೂರ್ಣನಾಗಲು ಪ್ರಯತ್ನಿಸುತ್ತಾನೆ. ಸಂಸ್ಕೃತದಲ್ಲಿರುವ ಸುಭಾಷಿತಗಳು ತಮ್ಮ ಅರ್ಥ ಗಾಂಭೀರ್ಯದ ಮೂಲಕ ಜೀವನದ ಪಾಠಗಳನ್ನು ಹೇಳಿಕೊಡುತ್ತವೆ. ವಿದ್ಯಾರ್ಥಿಗಳು ಅವುಗಳನ್ನು ಅಧ್ಯಯನ ಮಾಡುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಬಹುದುಎಂದು ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಜುಲೈ ತಿಂಗಳ ಪ್ರತಿಭಾ ಭಾರತೀಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
 
ವಿದ್ಯಾರ್ಥಿ ಸ್ಕಂದ ಮುರಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಜೊತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಿತ್ರಾ ಸರಸ್ವತಿ ಪೆರಡಾನ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿ ದೀಕ್ಷಾ.ಎಸ್ ಹಿಂದಿನ ಕಾರ್ಯಕ್ರಮದ ವರದಿಯನ್ನು ಮಂಡಿಸಿದರು.

    ವಿದ್ಯಾರ್ಥಿಗಳಾದ ಸೃಷ್ಟಿಕ್ ಸ್ವಾಗತಿಸಿ ದೀಕ್ಷಾ ವಂದಿಸಿದರು. ಆದಿತ್ಯ ಮತ್ತು ಸುಧನ್ವ ಕಾರ್ಯಕ್ರಮ ನಿರೂಪಿಸಿದರು.