Oct 23, 2015

ಶಾರದಾ ಪೂಜೆ


ವರ್ಷಂಪ್ರತಿ ಆಚರಿಸುವಂತೆ ನಮ್ಮ ವಿದ್ಯಾಪೀಠದಲ್ಲಿ ಇಂದು ಶ್ರೀ ಶಾರದಾ ಪೂಜೆ ಮತ್ತು ವಿದ್ಯಾರಂಭ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವೇದಮೂರ್ತಿ ಕೋಣಮ್ಮೆ ಶ್ರೀ ಮಹಾದೇವ ಭಟ್ಟರ ಪೌರೋಹಿತ್ಯದಲ್ಲಿ ಕಾರ್ಯಕ್ರಮಗಳು ನಡೆದವು. ಶಾಲಾ ಸಮಿತಿಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಮತ್ತು ಇತರರು ಉಪಸ್ಥಿತರಿದ್ದರು.

Oct 16, 2015

ಪ್ರತಿಭಾ ಭಾರತೀ - ಅಕ್ಟೋಬರ್


“ನಾವು ಭಾಷಾಪ್ರೇಮಿಗಳಾಗಿರಬೇಕು, ಯಾವುದೇ ಭಾಷೆಯನ್ನು ದ್ವೇಷಿಸಬಾರದು. ನಮ್ಮ ಪ್ರತಿಭೆಯನ್ನು ಉದ್ದೀಪನಗೊಳಿಸುವ ಮೂಲಕ ನಾವು ಭಾಷೆಗಳ ನಡುವೆ ಸಮನ್ವಯತೆಯನ್ನು ಸಾಧಿಸಬೇಕು. ಈ ನಿಟ್ಟಿನಲ್ಲಿ ಪ್ರತಿಭೆಗಳನ್ನು ಅನಾವರಣಗೊಳಿಸುವ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ದೊರೆಯುವಂತಾಗಬೇಕು.” ಎಂದು ಹವ್ಯಾಸಿ ಭಾಗವತ ಕಂಬಾರು ಕೇಶವ ಭಟ್ ಅಭಿಪ್ರಾಯಪಟ್ಟರು. ಅವರು ಇಂದು 16.10.2015 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಅಕ್ಟೋಬರ್ ತಿಂಗಳ ’ಪ್ರತಿಭಾ ಭಾರತೀ’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಕಿಶೋರಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಜೊತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಗ್ರಾಮೋತ್ಥಾನ ಟ್ರಸ್ಟಿನ ಸ್ಥಳೀಯ ಅಧಿಕಾರಿ ಚಂದ್ರಶೇಖರ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ ಮಾರ್ಗ, ಮುಖ್ಯಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ, ಸಂಸ್ಕೃತ ಶಿಕ್ಷಕ ಡಾ|ಎಸ್.ಸದಾಶಿವ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೃಷ್ಟಿಕ್ ಸ್ವಾಗತಿಸಿ ದೀಕ್ಷಾ.ಎಸ್ ವಂದಿಸಿದರು. ಅನನ್ಯ ಮತ್ತು ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.

Oct 2, 2015

ಸ್ವಚ್ಛ ಭಾರತ ಅಭಿಯಾನ




ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಮ್ಮ ಶಾಲಾ ಪರಿಸರದ ಶುಚೀಕರಣ ಕಾರ್ಯಕ್ರಮವು ಇಂದು ಜರಗಿತು. ಗ್ರಾಮೋತ್ಥಾನ ಸಮಿತಿಯ ಚಂದ್ರಶೇಖರ, ಮುನ್ನಿಪ್ಪಾಡಿ ಶಂಕರನಾರಾಯಣ ರಾವ್, ಶಾಲಾ ಸಮಿತಿಯ ಕೆ.ವೆಂಕಟ್ರಮಣ ಭಟ್ ಸೂರಂಬೈಲು ಮತ್ತು ಶಾಲಾ ಸಮಿತಿಯ ಜೊತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ನೇತೃತ್ವ ವಹಿಸಿದ್ದರು.