Jan 31, 2014

ನಾಳೆ - ವಿದ್ಯಾಸಂಸ್ಥೆಗಳ ವರ್ಧಂತ್ಯುತ್ಸವ, ಬನ್ನಿ...


ನಮ್ಮ ಶ್ರೀ ಭಾರತೀ ವಿದ್ಯಾಪೀಠ ಮತ್ತು ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯಗಳ ವರ್ಧಂತ್ಯುತ್ಸವವು ನಾಳೆ 01.02.2014 ಶನಿವಾರ ಜರಗಲಿದೆ. ಅಪರಾಹ್ನ 2.00 ಗಂಟೆಗೆ ಆರಂಭವಾಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಜುಂಗಾವು ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಮದನಗುಳಿ ರಾಮಚಂದ್ರ ಭಟ್ ವಹಿಸಲಿದ್ದಾರೆ. ಅಭ್ಯಾಗತರಾಗಿ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ಕೇರಳ ಗ್ರಾಮೀಣ ಬ್ಯಾಂಕ್ ರೀಜನಲ್ ಮೇನೇಜರ್ ದಾಮೋದರ.ಡಿ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಸದಾಶಿವ ನಾಯಕ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಳೀಯ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ. ವಿ.ಶೆಟ್ಟಿ ಭಾಗವಹಿಸಲಿದ್ದಾರೆ. ವರ್ಧಂತ್ಯುತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ನೀವೂ ಬನ್ನಿ...

ಕರಾಟೆ ಪಂದ್ಯಾವಳಿಯಲ್ಲಿ ಬಹುಮಾನಗಳು



ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜರಗಿದ ಅಂತರ್ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಬಹುಮಾನಗಳನ್ನು ಪಡೆದರು.

Jan 19, 2014

ಕ್ರೀಡೋತ್ಸವ 2013-14


ನಮ್ಮ ವಿದ್ಯಾಪೀಠದಲ್ಲಿ 16.01.2014 ಗುರುವಾರ ಮತ್ತು 17.01.2014 ಶುಕ್ರವಾರ ಜರಗಿದ ‘ಕ್ರೀಡೋತ್ಸವ’ವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ರಸಾದ್ ಕುಂಚಿನಡ್ಕ ಧ್ವಜಾರೋಹಣಗೈದು ಉದ್ಘಾಟಿಸಿದರು. ವಿದ್ಯಾರ್ಥಿಗಳು ಮತ್ತು ಪೂರ್ವ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು. ಬೆಳಗ್ಗೆ 10 ಗಂಟೆಗೆ ಧ್ವಜವಂದನೆಯೊಂದಿಗೆ ಆರಂಭವಾದ ಸ್ಪರ್ಧೆಗಳು ಎರಡು ದಿನಗಳ ಕಾಲ ಜರಗಿದವು.

ಪ್ರತಿಭಾ ಭಾರತೀ - ದಶಂಬರ 2013

"ವಿದ್ಯಾರ್ಥಿಗಳು ತಮ್ಮಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡು ಸಾಧನೆಯತ್ತ ಮನಸ್ಸನ್ನು ಕೇಂದ್ರೀಕರಿಸಬೇಕು. ಧರ್ಮ ಮತ್ತು ಸಂಸ್ಕೃತಿಯನ್ನು ಒಳಗೊಂಡ ಶಿಕ್ಷಣ ವ್ಯವಸ್ಥೆಯು ಭಾರತದ ಉತ್ತಮ ಪ್ರಜೆಗಳಿಗೆ ಮುನ್ನುಡಿಯಾಗಿದೆ. ಇಂತಹ ಬಹುಮುಖಿ ಶಿಕ್ಷಣ ವ್ಯವಸ್ಥೆಯನ್ನು ನೀಡುವ ಶಿಕ್ಷಣ ಸಂಸ್ಥೆಗಳನ್ನು ನಾವು ಪ್ರೋತ್ಸಾಹಿಸಬೇಕು” ಎಂದು ವರ್ಕಾಡಿ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ.ಎಸ್.ಭಟ್ ಬೆದ್ರಡಿ ಕಲ್ಲಕಟ್ಟ ಅಭಿಪ್ರಾಯಪಟ್ಟರು. ಅವರು 20.12.2013 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ದಶಂಬರ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಮನೀಶ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಭಟ್, ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿ ಮಾನಸ ಗತ ಕಾರ್ಯಕ್ರಮದ ವರದಿಯನ್ನು ಮಂಡಿಸಿದರು.

    ವಿದ್ಯಾರ್ಥಿಗಳಾದ ಸುಮೇಘ ಸ್ವಾಗತಿಸಿ ಸಂಕೇತ ವಂದಿಸಿದರು. ಗೌರೀಶ ವಿಶ್ವಾಮಿತ್ರ ಮತ್ತು ದೀಪಕ್ ಕಾರ್ಯಕ್ರಮ ನಿರೂಪಿಸಿದರು.