Jul 8, 2014

ವನಜೀವನ ಯಜ್ಞ 2014




                ಹವಾಮಾನದ ವೈಪರೀತ್ಯವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆ ಮತ್ತು ಹಸಿರನ್ನು ಬೆಳೆಸುವ ಪ್ರಕ್ರಿಯೆ ಅಗತ್ಯವಾಗಿ ಆಗಬೇಕಾಗಿದೆ. ವಿದ್ಯಾರ್ಥಿಗಳಿಗೆ ನಿಟ್ಟಿನಲ್ಲಿ ತರಬೇತಿ ಅಗತ್ಯ. ಜಾಗತಿಕ ಬಿಸಿ ಏರುವಿಕೆಯನ್ನು ತಡೆದು ನೆಮ್ಮದಿಯ ಜೀವನವನ್ನು ಸಾಗಿಸಲು ಇದು ಸಹಕಾರಿಯಾಗಲಿದೆಎಂದು ಮುಜುಂಗಾವು ಗ್ರಾಮೋತ್ಥಾನ ಕೇಂದ್ರದ ಅಧ್ಯಕ್ಷ ಎಂ.ಶಂಕರನಾರಾಯಣ ರಾವ್ ಅಭಿಪ್ರಾಯಪಟ್ಟರು. ಅವರು 28.06.2014 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದವನಜೀವನ ಯಜ್ಞಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೋತ್ಥಾನ ಕೇಂದ್ರದ ಉಪಾಧ್ಯಕ್ಷ .ಪಿ.ಜನಾರ್ದನ, ಕೃಷಿಕ ಕೆ.ಎಸ್.ಶಂಕರ ಭಟ್ ಕಾವೇರಿಕಾನ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ. ಚಂದ್ರಶೇಖರ ಭಟ್ ಬೆಜಪ್ಪೆ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಗ್ರಾಮೋತ್ಥಾನ ಕೇಂದ್ರದ ಕಾರ್ಯದರ್ಶಿ ಬಾಲಕೃಷ್ಣ ಶರ್ಮ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ವಿದ್ಯಾಶ್ರೀ ಸ್ವಾಗತಿಸಿ ಲಕ್ಷ್ಮಣ ಕುಮಾರ ವಂದಿಸಿದರು. ನಿಶಿತಾ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.

No comments:

Post a Comment