Jul 29, 2014
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದಿಂದ ಕಲಿಕೋಪಕರಣಗಳ ಕೊಡುಗೆ
“ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಅನ್ಯರ ಸಹಕಾರ ಹೆಚ್ಚು ಅಪೇಕ್ಷಣೀಯ. ಬಡ ವಿದ್ಯಾರ್ಥಿಗಳಿಗೆ ಕಲಿಕೆಯ ಸಂಪನ್ಮೂಲಗಳ ಕ್ರೋಡೀಕರಣಕ್ಕಾಗಿ ಸ್ವಯಂಸೇವಾ ಸಂಸ್ಥೆಗಳು ಸಹಕಾರಿಗಳಾಗಬೇಕು. ದೇವರ ಭಯವೇ ಜ್ಞಾನದ ಆರಂಭವಾದುದರಿಂದ ಜನತಾ ಜನಾರ್ದನರ ಸೇವೆ ಈ ನಿಟ್ಟಿನಲ್ಲಿ ಅಗತ್ಯ. ಪರಿಣಾಮವಾಗಿ ಸಮಾಜದ ಬೆಳಕಿನಲ್ಲಿ ಬೆಳೆಯುವ ವಿದ್ಯಾರ್ಥಿಗಳು ಹೆಚ್ಚು ಪ್ರಗತಿ ಹೊಂದಬೇಕು ಹಾಗೂ ತನ್ಮೂಲಕ ಸಹಕರಿಸಿದ ಸಂಸ್ಥೆಗಳಿಗೆ ಕೀರ್ತಿ ತರಬೇಕು” ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಉಡುಪುಮೂಲೆ ರಘುರಾಮ ಭಟ್ ಅಭಿಪ್ರಾಯಪಟ್ಟರು. ಅವರು 25.07.2014 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಹವ್ಯಕ ಭಾಷೆಯ ಬೆಳವಣಿಗೆಗಾಗಿ ಅಂತರ್ಜಾಲದಲ್ಲಿ ರೂಪುಗೊಂಡಿರುವ ಒಪ್ಪಣ್ಣ ಡಾಟ್ ಕಾಮ್, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ವಿದ್ಯಾರ್ಥಿಗಳಿಗಾಗಿ ಕೊಡಮಾಡಿದ ಕಲಿಕೋಪಕರಣಗಳ ವಿತರಣೆ ಮತ್ತು ತಿಂಗಳ ’ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿ ಆದಿತ್ಯ ಶರವಣ ಹಿಳ್ಳೆಮನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿ.ಕೃಷ್ಣ ಭಟ್
ಕುಂಚಿನಡ್ಕ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಭರತನಾಟ್ಯ ಕಲಾವಿದೆ ಅನುಪಮಾ ರಾಘವೇಂದ್ರ ಉಡುಪುಮೂಲೆ,
ಛಾಯಾಗ್ರಾಹಕ ಹರೀಶ್
ಹಳೆಮನೆ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ
ಶ್ರೀಜಾ ಗಿರೀಶ್ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಸಂಯುಕ್ತ.ಎಂ ಸ್ವಾಗತಿಸಿ ವಿಕ್ರಮ್
ವಂದಿಸಿದರು. ರೇಶ್ಮಾ ರಾಮಚಂದ್ರ ಹಾಗೂ ತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
Jul 14, 2014
ಗುರು ಪೂರ್ಣಿಮಾ 2014
“ಗುರು ಸರ್ವಜ್ಞ, ಸರ್ವಜ್ಞ ಪ್ರತಿಯೊಬ್ಬರಿಂದ ಒಂದೊಂದು ನುಡಿ ಕಲಿತು ಸರ್ವಜ್ಞತ್ವಕ್ಕೇರಿದ. ಗುರುಪೂರ್ಣಿಮೆಯ
ಸಂದರ್ಭದಲ್ಲಿ ನಾವೆಲ್ಲರೂ ಹಿತನುಡಿಗಳನ್ನು ಕಲಿತು ಆಚರಿಸುವ ಸಂಕಲ್ಪವನ್ನು ಮಾಡಬೇಕಾಗಿದೆ”
ಎಂದು ನಮ್ಮ ಶಾಲಾ ಸೇವಾ ಸಮಿತಿಯ ಅಧ್ಯಕ್ಷ ಮದನಗುಳಿ ರಾಮಚಂದ್ರ ಭಟ್ ಅಭಿಪ್ರಾಯಪಟ್ಟರು. ಅವರು ಮೊನ್ನೆ, 12.07.2014 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಗುರುಪೂರ್ಣಿಮಾ’ ಕಾರ್ಯಕ್ರಮದಲ್ಲಿ ಮುಖ್ಯ
ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕುಂಬಳೆ ವಲಯ ಗುರಿಕಾರ ಕೆ.ಎಸ್.ಶಂಕರ ಭಟ್ ಕಾವೇರಿಕಾನ, ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ
ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ, ಹಿರಿಯ ಶಿಕ್ಷಕ ಕೃಷ್ಣ ಭಟ್
ಉಪಸ್ಥಿತರಿದ್ದರು. ವಿಶಿಷ್ಟ ರೀತಿಯಲ್ಲಿ ನಡೆದ ಕಾರ್ಯಕ್ರಮವನ್ನು ಸುಪ್ರೀತಿ ಎನ್.ಧರ್ಮತ್ತಡ್ಕ
ನಿರ್ವಹಿಸಿದರು.
Jul 8, 2014
ಜೇವರ್ ಜೀ ಭೇಟಿ
ಶಾಲಾ ಸಮಿತಿಯ ಅಧ್ಯಕ್ಷ ರಾಮಚಂದ್ರ
ಭಟ್ ಮದನಗುಳಿ ಸಮಾರಂಭದ ಅಧ್ಯಕ್ಷತೆ
ವಹಿಸಿದ್ದರು. ಧರ್ಮಚಕ್ರ ಟ್ರಸ್ಟ್ ಅಧೀನದಲ್ಲಿರುವ ವಿದ್ಯಾ
ಸಂಸ್ಥೆಗಳ ಇ-ಶಿಕ್ಷಣ ವಿಭಾಗದ
ಶ್ರೀಹರ್ಷ, ಸಿದ್ಧಾಂತ ಫೌಂಡೇಶನ್ ಶಿಕ್ಷಣ ವಿಭಾಗದ ಕಾರ್ಯದರ್ಶಿ
ಶ್ರೀಮತಿ ರೆಮಾ, ಭಾಗವತ ಪ್ರವಚನಕಾರ
ನಾರಾಯಣನ್ ಪೋತ್ತಿ, ಶಾಲಾ ಸಮಿತಿಯ
ಉಪಾಧ್ಯಕ್ಷ ಶಂಕರಪ್ರಸಾದ್ ನಾಯ್ಕಾಪು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಚಿತ್ರಾ ಪೆರಡಾನ ಸ್ವಾಗತಿಸಿ
ಶಿವಕುಮಾರಿ ವಂದಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ
ಭಟ್ ದರ್ಬೆ ಮಾರ್ಗ ಕಾರ್ಯಕ್ರಮ
ನಿರೂಪಿಸಿದರು.
ಹಲಸು ಉಪನ್ಯಾಸ
ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ
ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ
ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀವತ್ಸ ಸ್ವಾಗತಿಸಿ ಕೌಶಿಕ್ ವಂದಿಸಿದರು. ವಿಕ್ರಮ್
ಕಾರ್ಯಕ್ರಮ ನಿರೂಪಿಸಿದರು.
ವನಜೀವನ ಯಜ್ಞ 2014

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ
ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮೋತ್ಥಾನ ಕೇಂದ್ರದ ಉಪಾಧ್ಯಕ್ಷ ಎ.ಪಿ.ಜನಾರ್ದನ, ಕೃಷಿಕ
ಕೆ.ಎಸ್.ಶಂಕರ ಭಟ್
ಕಾವೇರಿಕಾನ, ರಕ್ಷಕ ಶಿಕ್ಷಕ ಸಂಘದ
ಅಧ್ಯಕ್ಷ ಎಂ. ಚಂದ್ರಶೇಖರ ಭಟ್
ಬೆಜಪ್ಪೆ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ
ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.
ಗ್ರಾಮೋತ್ಥಾನ ಕೇಂದ್ರದ ಕಾರ್ಯದರ್ಶಿ ಬಾಲಕೃಷ್ಣ
ಶರ್ಮ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ
ವಿದ್ಯಾಶ್ರೀ ಸ್ವಾಗತಿಸಿ ಲಕ್ಷ್ಮಣ ಕುಮಾರ ವಂದಿಸಿದರು.
ನಿಶಿತಾ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
Subscribe to:
Posts (Atom)