ನಮ್ಮ ಶ್ರೀ ಭಾರತೀ ವಿದ್ಯಾಪೀಠ ಮತ್ತು ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯಗಳ ವರ್ಧಂತ್ಯುತ್ಸವವು ನಾಳೆ 01.02.2014 ಶನಿವಾರ ಜರಗಲಿದೆ. ಅಪರಾಹ್ನ 2.00 ಗಂಟೆಗೆ ಆರಂಭವಾಗುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಜುಂಗಾವು ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಮದನಗುಳಿ ರಾಮಚಂದ್ರ ಭಟ್ ವಹಿಸಲಿದ್ದಾರೆ. ಅಭ್ಯಾಗತರಾಗಿ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅಶ್ವಿನಿ ನಾಣಿತ್ತಿಲು, ಕೇರಳ ಗ್ರಾಮೀಣ ಬ್ಯಾಂಕ್ ರೀಜನಲ್ ಮೇನೇಜರ್ ದಾಮೋದರ.ಡಿ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಸದಾಶಿವ ನಾಯಕ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಳೀಯ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ. ವಿ.ಶೆಟ್ಟಿ ಭಾಗವಹಿಸಲಿದ್ದಾರೆ. ವರ್ಧಂತ್ಯುತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ನೀವೂ ಬನ್ನಿ...
Jan 31, 2014
ನಾಳೆ - ವಿದ್ಯಾಸಂಸ್ಥೆಗಳ ವರ್ಧಂತ್ಯುತ್ಸವ, ಬನ್ನಿ...

Jan 19, 2014
ಕ್ರೀಡೋತ್ಸವ 2013-14
ನಮ್ಮ ವಿದ್ಯಾಪೀಠದಲ್ಲಿ 16.01.2014 ಗುರುವಾರ ಮತ್ತು 17.01.2014 ಶುಕ್ರವಾರ ಜರಗಿದ ‘ಕ್ರೀಡೋತ್ಸವ’ವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ರಸಾದ್ ಕುಂಚಿನಡ್ಕ ಧ್ವಜಾರೋಹಣಗೈದು ಉದ್ಘಾಟಿಸಿದರು. ವಿದ್ಯಾರ್ಥಿಗಳು ಮತ್ತು ಪೂರ್ವ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು. ಬೆಳಗ್ಗೆ 10 ಗಂಟೆಗೆ ಧ್ವಜವಂದನೆಯೊಂದಿಗೆ ಆರಂಭವಾದ ಸ್ಪರ್ಧೆಗಳು ಎರಡು ದಿನಗಳ ಕಾಲ ಜರಗಿದವು.
ಪ್ರತಿಭಾ ಭಾರತೀ - ದಶಂಬರ 2013
"ವಿದ್ಯಾರ್ಥಿಗಳು ತಮ್ಮಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡು ಸಾಧನೆಯತ್ತ ಮನಸ್ಸನ್ನು ಕೇಂದ್ರೀಕರಿಸಬೇಕು. ಧರ್ಮ ಮತ್ತು ಸಂಸ್ಕೃತಿಯನ್ನು ಒಳಗೊಂಡ ಶಿಕ್ಷಣ ವ್ಯವಸ್ಥೆಯು ಭಾರತದ ಉತ್ತಮ ಪ್ರಜೆಗಳಿಗೆ ಮುನ್ನುಡಿಯಾಗಿದೆ. ಇಂತಹ ಬಹುಮುಖಿ ಶಿಕ್ಷಣ ವ್ಯವಸ್ಥೆಯನ್ನು ನೀಡುವ ಶಿಕ್ಷಣ ಸಂಸ್ಥೆಗಳನ್ನು ನಾವು ಪ್ರೋತ್ಸಾಹಿಸಬೇಕು” ಎಂದು ವರ್ಕಾಡಿ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ.ಎಸ್.ಭಟ್ ಬೆದ್ರಡಿ ಕಲ್ಲಕಟ್ಟ ಅಭಿಪ್ರಾಯಪಟ್ಟರು. ಅವರು 20.12.2013 ಶುಕ್ರವಾರ ನಮ್ಮ
ವಿದ್ಯಾಪೀಠದಲ್ಲಿ ಜರಗಿದ ದಶಂಬರ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿ ಮನೀಶ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಭಟ್, ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿ ಮಾನಸ ಗತ ಕಾರ್ಯಕ್ರಮದ ವರದಿಯನ್ನು ಮಂಡಿಸಿದರು.
ವಿದ್ಯಾರ್ಥಿಗಳಾದ ಸುಮೇಘ ಸ್ವಾಗತಿಸಿ ಸಂಕೇತ ವಂದಿಸಿದರು. ಗೌರೀಶ ವಿಶ್ವಾಮಿತ್ರ ಮತ್ತು ದೀಪಕ್ ಕಾರ್ಯಕ್ರಮ ನಿರೂಪಿಸಿದರು.

Dec 12, 2013
ಪತ್ರಿಕಾ ವರದಿ ರಚನಾ ಕಾರ್ಯಾಗಾರ
“ಶತಮಾನಗಳ ಹಿಂದೆಯೇ ಆರಂಭವಾದ ಪತ್ರಿಕಾ ಮಾಧ್ಯಮ ಈಗಲೂ ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳು ಸಮಾಜದೊಳಗಿನ ಸಂವಹನ ಸೇತುವೆಯಾಗಿ ಬೆಳೆಯುತ್ತಿವೆ. ಪುಟಾಣಿಗಳಿಂದ ಆರಂಭಿಸಿ ವೃದ್ಧರ ತನಕ ಆಯಾ ವಯೋಮಾನದವರಿಗಾಗಿ ಮೀಸಲಾದ ಅಂಕಣಗಳನ್ನು ಹೊತ್ತಿರುವ ಪತ್ರಿಕೆಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಬೇರೂರುತ್ತಿವೆ. ಹೀಗೆ ಜನರಿಗೆ ಅಗತ್ಯವಾದ ವೈವಿಧ್ಯವನ್ನು ನೀಡಲು ಪತ್ರಿಕಾ ಮಾಧ್ಯಮವು ಸಹಕಾರಿಯಾಗಿದೆ. ಆದ್ದರಿಂದ ಈ ಮಾಧ್ಯಮದ ಸದುಪಯೋಗವನ್ನು ಪಡೆದುಕೊಳ್ಳಲು ಪತ್ರಿಕಾ ವರದಿಯನ್ನು ಬರೆಯುವ ಕಲೆಯನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಎಂದು ಸಿರಿಗನ್ನಡ ವೇದಿಕೆ ಕಾಸರಗೋಡು ಘಟಕದ ಅಧ್ಯಕ್ಷ, ಸಾಹಿತಿ ವಿ.ಬಿ.ಕುಳಮರ್ವ ಅಭಿಪ್ರಾಯಪಟ್ಟರು. ಅವರು 30.11.2013 ಶನಿವಾರ ನಮ್ಮ ವಿದ್ಯಾಪೀಠದಲ್ಲಿ ಸಿರಿಗನ್ನಡ ವೇದಿಕೆಯ ಕಾಸರಗೋಡು ಗಡಿನಾಡ ಘಟಕದ ಆಶ್ರಯದಲ್ಲಿ ಜರಗಿದ ‘ಜ್ಞಾನ ಭಾರತೀ-ಪತ್ರಿಕಾ ವರದಿ ರಚನಾ ಕಾರ್ಯಾಗಾರ’ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಪ್ರಬಂಧ ರಚನೆಯ ವೈವಿಧ್ಯಗಳ ಕುರಿತು ಚುಟುಕು ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ ಮಾಹಿತಿ ನೀಡಿದರು. ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ, ಸಿರಿಗನ್ನಡ ವೇದಿಕೆಯ ಕಾಸರಗೋಡು ಮಹಿಳಾ ಘಟಕದ ಅಧ್ಯಕ್ಷೆ ವಿಜಯಾ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ವೇತಾ. ಕೆ ಸ್ವಾಗತಿಸಿ ಗೌರೀಶ ವಿಶ್ವಾಮಿತ್ರ ವಂದಿಸಿದರು. ಶುಭಲಕ್ಷ್ಮಿ ಯಾಜಿ ಕಾರ್ಯಕ್ರಮ ನಿರೂಪಿಸಿದರು.
Dec 7, 2013
ಜ್ಞಾನಭಾರತೀ - 2013
“ಹದಿಹರೆಯದ ಮಕ್ಕಳು ಸಮಾಜದ ಸೊತ್ತು. ಅವುಗಳನ್ನು ಹಾಳುಗೆಡವಬಾರದು. ಬೆಳೆಯುತ್ತಿರುವ ಗಿಡವನ್ನು ಚಿವುಟಿದರೆ ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಬೆಳೆಯಬೇಕು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು." ಎಂದು ಕಾಸರಗೋಡಿನ ಖ್ಯಾತ ವೈದ್ಯೆ ಡಾ|ವಾರುಣಿ ಶ್ರೀರಾಮ್ ಅಭಿಪ್ರಾಯಪಟ್ಟರು. ಅವರು ಮೊನ್ನೆ 05.12.2013 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಜ್ಞಾನ ಭಾರತೀ’ ಕಾರ್ಯಕ್ರಮ ಸರಣಿಯ ‘ವೈದ್ಯರೊಂದಿಗೆ ಮಾತುಕತೆ’ಯಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದರು.
ಶಾಲಾ ವಿದ್ಯಾರ್ಥಿ ನಾಯಕಿ ಶ್ವೇತಾ ಸ್ವಾಗತಿಸಿ ಮಾನಸ ವಂದಿಸಿದರು.
ಶಾಲಾ ವಿದ್ಯಾರ್ಥಿ ನಾಯಕಿ ಶ್ವೇತಾ ಸ್ವಾಗತಿಸಿ ಮಾನಸ ವಂದಿಸಿದರು.
Nov 28, 2013
ಅಡುಗೆ ತಯಾರಿ ತರಬೇತಿ
ಮೊನ್ನೆ ಸೋಮವಾರ ನವೆಂಬರ್ 25ರಂದು ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಒಂದು ವಿಶಿಷ್ಠ ಅನುಭವ. ಹತ್ತನೇ ತರಗತಿಯ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಅವರಿಗೋಸ್ಕರ ಏರ್ಪಡಿಸಿದ ‘ಅಡುಗೆ ತರಗತಿ’ ಯಶಸ್ವಿಯಾಯಿತು. ತರಬೇತಿ ನೀಡಿದ ಆಶಾಶಾರದಾ ದೊಡ್ಡಮಾಣಿ ಇವರಿಗೆ ಅಭಿನಂದನೆಗಳು. ನಿಮ್ಮೆಲ್ಲರ ಪ್ರೋತ್ಸಾಹದೊಂದಿಗೆ ಇಂತಹ ಇನ್ನಷ್ಟು ತರಗತಿಗಳನ್ನು ನಡೆಸಬೇಕೆಂಬ ಹಂಬಲ ನಮಗಿದೆ. ನಿಮ್ಮ ಅಮೂಲ್ಯ ಸಮಯವನ್ನು ನಮ್ಮ ಜೊತೆ, ವಿದ್ಯಾರ್ಥಿಗಳ ಜೊತೆ ಹಂಚಿಕೊಳ್ಳಿ...
Nov 15, 2013
ಪ್ರತಿಭಾ ಭಾರತೀ - ನವೆಂಬರ್
“ಮಕ್ಕಳು
ನಾಡಿನ ಸಂಪತ್ತು. ಅವರ ಜೊತೆಗಿನ ಬಾಂಧವ್ಯ ವೃದ್ಧಿಗಾಗಿ ಹಿರಿಯರು ಕಂಡ ದಾರಿ ಮಕ್ಕಳ ದಿನಾಚರಣೆ. ಪಂಡಿತ್
ಜವಹರಲಾಲ್ ನೆಹರೂ ಅವರಿಗೆ ಪುಟಾಣಿಗಳ ಮೇಲಿದ್ದ ಪ್ರೀತಿ ವ್ಯಕ್ತವಾದ ಈ ಪರಿ ಮಕ್ಕಳ ದಿನದ ಆಚರಣೆಗೆ
ಕಾರಣವಾಯಿತು. ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡುವ ಮಕ್ಕಳು ತಮ್ಮ ಪ್ರತಿಭೆಯನ್ನು ಬಹುಮುಖಿಯಾಗಿಸುತ್ತಾರೆ.
ಅನುಭವಿಸುತ್ತಾ ನೀಡುವ ಈ ಕಾರ್ಯಕ್ರಮಗಳು ಆನಂದದಾಯಕವಾಗಿರುತ್ತವೆ.” ಎಂದು ಕುಂಬಳೆ ವಲಯ ಅಧ್ಯಕ್ಷ
ಇ. ಕೃಷ್ಣಮೋಹನ ಭಟ್ ಅಭಿಪ್ರಾಯಪಟ್ಟರು. ಅವರು ನಿನ್ನೆ 14.11.2013 ಗುರುವಾರ ನಮ್ಮ ವಿದ್ಯಾಪೀಠದಲ್ಲಿ
ಜರಗಿದ ನವೆಂಬರ್ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿ
ಶ್ರೀವತ್ಸ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ
ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ
ಗತ ಕಾರ್ಯಕ್ರಮದ ವರದಿಯನ್ನು ಮಂಡಿಸಿದರು.
ವಿದ್ಯಾರ್ಥಿಗಳಾದ ನಿಶಿತಾ ಸ್ವಾಗತಿಸಿ ಮಾನಸ ವಂದಿಸಿದರು.
ಭಾವನಾ ಮತ್ತು ಚೈತ್ರ ಕಾರ್ಯಕ್ರಮ ನಿರೂಪಿಸಿದರು.
Oct 27, 2013
Oct 10, 2013
ಬ್ಯಾಂಕಿಂಗ್ ಮಾಹಿತಿ ಶಿಬಿರ
“ಜೀವನದ ಭದ್ರತೆಗೆ ಬ್ಯಾಂಕಿಂಗ್ ಅಗತ್ಯ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಉಳಿತಾಯದ ಮಹತ್ವವನ್ನು ಮನಗ೦ಡು ಅಭ್ಯಾಸ ಮಾಡಿಕೊಳ್ಳಬೇಕು. ನಾಳೆಗಾಗಿ ಹಣವನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ಮತ್ತು ಅಗತ್ಯಗಳಿಗಾಗಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಬ್ಯಾಂಕಿಂಗ್ ಉತ್ತಮ ವ್ಯವಸ್ಥೆಯಾಗಿದೆ ಎಂದು ನಬಾರ್ಡ್ ಸಂಸ್ಥೆಯ ಫಿನಾನ್ಶಿಯಲ್ ಲಿಟರಸಿ ಏಜೆನ್ಸಿಯ ಜಗನ್ನಾಥ ಶೆಟ್ಟಿ ಕುಂಬಳೆ ಅಭಿಪ್ರಾಯಪಟ್ಟರು. ಅವರು
ನಿನ್ನೆ 09.10.2013 ಮಂಗಳವಾರ ನಮ್ಮ ವಿದ್ಯಾಪೀಠದಲ್ಲಿ ನಡೆದ ಬ್ಯಾಂಕಿಂಗ್ ಮಾಹಿತಿ ಶಿಬಿರದಲ್ಲ್ಲಿ ಮಾತನಾಡುತ್ತಿದ್ದರು.
ಶಾಲಾ ಸಮಿತಿಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸ್ಮಿತಾ ಆಳ್ವ ಸ್ವಾಗತಿಸಿ ವಂದಿಸಿದರು.
ಶಾಲಾ ಸಮಿತಿಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸ್ಮಿತಾ ಆಳ್ವ ಸ್ವಾಗತಿಸಿ ವಂದಿಸಿದರು.
Oct 3, 2013
Sep 26, 2013
Aug 31, 2013
ಗಮಕ ವಾಚನ - ಪ್ರವಚನ
“ಪುರಾಣ ಪ್ರವಚನಗಳನ್ನು ಕೇಳುವ ಮೂಲಕ ನಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಳ್ಳುವ ಅವಕಾಸವಿದೆ. ಈ ನಿಟ್ಟಿನಲ್ಲಿ ಅಪೂರ್ವವಾಗುತ್ತಿರುವ ಗಮಕ ಕಲೆಯನ್ನು ಉಳಿಸಿಕೊಳ್ಳಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಈ ಉದ್ದೇಶದಿಂದ ಕುಶಲವರ ಜನ್ಮಮಾಸ ಶ್ರಾವಣವನ್ನು ಗಮಕ ಮಾಸವಾಗಿ ಆಚರಿಸಲಾಗುತ್ತಿದೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತು, ಕೇರಳ ಗಡಿನಾಡು ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಯಣ ಭಟ್ ಹೇಳಿದರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು, ಕೇರಳ ಗಡಿನಾಡು ಘಟಕ ಆಯೋಜಿಸಿದ ‘ಗಮಕ ವಾಚನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಶಾಲಾ ಸಮಿತಿಯ ಅಧ್ಯಕ್ಷ ಡಾ|ಡಿ.ಪಿ.ಭಟ್, ಸಾಹಿತಿ ವಿ.ಬಿ.ಕುಳಮರ್ವ ಉಪಸ್ಥಿತರಿದ್ದರು. ಇಚ್ಲಂಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಭಾರತಿ ಗಮಕ ವಾಚನ ನಡೆಸಿದರು. ಇಚ್ಲಂಪಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ನರಹರಿ.ಪಿ ಪ್ರವಚನ ನೀಡಿದರು.
ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ದೀಕ್ಷಿತಾ.ಬಿ ಸ್ವಾಗತಿಸಿ ಕಾರ್ತಿಕ್.ಎಸ್ ವಂದಿಸಿದರು. ಶುಭಲಕ್ಷ್ಮಿ ಯಾಜಿ ಕಾರ್ಯಕ್ರಮ ನಿರೂಪಿಸಿದರು.
Subscribe to:
Posts (Atom)