Dec 12, 2011
Dec 6, 2011
ಜ್ಞಾನ ಭಾರತೀ
ಕಳೆದ ವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಜ್ಞಾನ ಭಾರತೀ ಕಾರ್ಯಕ್ರಮದಲ್ಲಿ ನಿವೃತ್ತ ಜೈಲು ಸೂಪರಿಟೆಂಡೆಂಟ್ ಡಿ.ಪಿ.ಪರಮೇಶ್ವರ ಹೆಬ್ಬಾರ್ ಕುದ್ರೆಪ್ಪಾಡಿ ವಿದ್ಯಾರ್ಥಿಗಳಿಗೆ ‘ಹಿರಿಯರೊಂದಿಗೆ ಮಾತುಕತೆ’ಯ ಅನುಭವವನ್ನು ಕಟ್ಟಿಕೊಟ್ಟರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು.
Oct 29, 2011
ಅಕ್ಟೋಬರ್ ತಿಂಗಳ ‘ಪ್ರತಿಭಾ ಭಾರತೀ’
“ಮುಜುಂಗಾವಿನ ಪ್ರಶಾಂತ ಪರಿಸರ, ದೇವಾಲಯದ ಸನಿಹದಲ್ಲಿ ವಿದ್ಯಾರ್ಜನೆ ಮಾಡುವುದು ಒಂದು ಸುಯೋಗ. ಆಧುನಿಕತೆಯ ಕಡೆಗೆ ಪೂರ್ತಿಯಾಗಿ ಮುಖ ಮಾಡದೆ ಇನ್ನೂ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಿದ ವಿದ್ಯಾಭ್ಯಾಸ ನೀಡುತ್ತಿರುವ ಶ್ರೀ ಭಾರತೀ ವಿದ್ಯಾಪೀಠ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ದಾರಿಯನ್ನು ನಿರಂತರವಾಗಿ ತೋರುತ್ತಿದೆ. ಇದು ವಿದ್ಯಾರ್ಥಿಗಳ ಬಹುಮುಖಿ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ." ಎಂದು ಸಾಹಿತಿ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಅಕ್ಟೋಬರ್ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಜೀವಿತ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸುಪ್ರೀತಾ ಸ್ವಾಗತಿಸಿ, ದೀಪಕ್ ಶ್ರೀವತ್ಸ ವಂದಿಸಿದರು. ಕಾರ್ತಿಕ್. ಎಸ್ ಮತ್ತು ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.
Oct 10, 2011
Oct 3, 2011
ಪೊಸಡಿ ಗುಂಪೆ ಬೆಟ್ಟ ನೋಡು...
ನಿನ್ನೆ ಗಾಂಧಿ ಜಯಂತಿ ರಜೆ. ರಜಾ ದಿನವಾದ್ದರಿಂದ ನಮ್ಮ ಶಾಲಾ ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯ ಉನ್ನತ ಶಿಖರಗಳಲ್ಲಿ ಒಂದಾದ ಪೊಸಡಿ ಗುಂಪೆಗೆ ಚಾರಣವನ್ನು ಮಾಡಿದರು. ವಿದ್ಯಾರ್ಥಿಗಳಿಗೆ ಚಾರಣದ ವಿಶಿಷ್ಟ ಅನುಭೂತಿಯನ್ನು ಪೊಸಡಿ ಗುಂಪೆ ನೀಡಿತು. 8,9,10 ತರಗತಿಯ ವಿದ್ಯಾರ್ಥಿಗಳು ಗುಡ್ಡ ತುದಿಯಲ್ಲಿರುವ ಅಕ್ಕ ತಂಗಿಯರ ಬಾವಿ, ಅಕ್ಕ ತಂಗಿಯರ ಹೂಗಳನ್ನು ವೀಕ್ಷಿಸಿದರು. ಶ್ರೀರಾಮಚಂದ್ರಾಪುರ ಮಠದ ಉದ್ದೇಶಿತ ಶ್ರೀ ಶಂಕರ ಧ್ಯಾನ ಮಂದಿರ ನಿರ್ಮಾಣದ ಉದ್ದೇಶಿತ ಸ್ಥಳವನ್ನು ನೋಡಿ, ಸೂರ್ಯಾಸ್ತದ ಸೊಬಗನ್ನು ನೋಡುತ್ತಾ ಮರಳಿ ಮನೆಯ ದಾರಿ ಹಿಡಿದರು.
Oct 1, 2011
ಪ್ರತಿಭಾ ಭಾರತೀ - ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮ
29.09.2011 ಗುರುವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿದ ಸೆಪ್ಟೆಂಬರ್ ತಿಂಗಳ ಪ್ರತಿಭಾ ಭಾರತೀ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಬಿ.ರಾವ್ ಪ್ರಧಾನ ಭಾಷಣ ಮಾಡಿದರು. ವಿದ್ಯಾರ್ಥಿನಿ ಶ್ವೇತಾ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಸುಹಾಸ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ವೈಶಾಲಿ ಮತ್ತು ಕವಿತಾ ಕಾರ್ಯಕ್ರಮ ನಿರೂಪಿಸಿದರು. ಗೌರೀಶ ವಿಶ್ವಾಮಿತ್ರ ಧನ್ಯವಾದ ಸಮರ್ಪಿಸಿದರು.
Sep 26, 2011
ಚಿನ್ಮಯ ವಿದ್ಯಾಲಯದಲ್ಲಿ ಭಗವದ್ಗೀತೆ
ಸೆಪ್ಟೆಂಬರ್ ೨೧ರಂದು ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಆಯೋಜಿಸಲ್ಪಟ್ಟ ಭಗವದ್ಗೀತಾ ಕಂಠಪಾಠ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಇಂದಿರಾ. ಯಂ, ಕಿರಣ್ ಮಹೇಶ್, ಚೈತ್ರಾ, ಮನೀಶ್, ಕೃಷ್ಣ ಶೌರಿ. ಡಿ.ಎಸ್, ಚಿನ್ಮಯಿ. ಎಂ, ಗೌರೀಶ ವಿಶ್ವಾಮಿತ್ರ ಮತ್ತು ಅರುಣ ಶಂಕರ ಪ್ರತ್ಯೇಕ ವಿಭಾಗಗಳಲ್ಲಿ ಭಾಗಹಿಸಿದ್ದರು. ಆಯ್ದ ಕೆಲವೇ ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದ ಪ್ರೋತ್ಸಾಹಕ ಬಹುಮಾನ ನಮ್ಮ ವಿದ್ಯಾಪೀಠದ ಇಂದಿರಾ. ಎಂ, ಕಿರಣ್ ಮಹೇಶ್, ಕೃಷ್ಣ ಶೌರಿ. ಡಿ.ಎಸ್ ಮತ್ತು ಚಿನ್ಮಯಿ. ಎಂ ಇವರಿಗೆ ದೊರೆತಿದೆ. ಎಲ್ಲರಿಗೂ ಶುಭಾಶಯಗಳು...
Aug 24, 2011
Aug 19, 2011
'ರಾಮಾಯಣ ಮಾಸಾಚರಣೆ’ ಸಮಾರೋಪ
ನಮ್ಮ ವಿದ್ಯಾಪೀಠದಲ್ಲಿ ೧೮.೦೮.೨೦೧೧ ಗುರುವಾರ ಜರಗಿದ ‘ರಾಮಾಯಣ ಮಾಸಾಚರಣೆ’ಯ ಸಮಾರೋಪ ಮತ್ತು ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಉಂಡೆಮನೆ ಗಣಪತಿ ಭಟ್ಟ ಮುಖ್ಯ ಭಾಷಣ ಮಾಡಿದರು. ಶಾಲಾ ವಿದ್ಯಾರ್ಥಿ ನಿಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.
ಶಾಲಾ ನಾಯಕ ಸುಹಾಸ್ ಕಾಕತ್ಕರ್ ಸ್ವಾಗತಿಸಿ, ವಿದ್ಯಾರ್ಥಿನಿ ಅಶ್ವತಿ ವಂದಿಸಿದರು. ಕೃಷ್ಣ ಕಿರಣ ವರದಿ ವಾಚಿಸಿದರು. ಅನುಷ ಮತ್ತು ಅರ್ಪಿತ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ನಾಯಕ ಸುಹಾಸ್ ಕಾಕತ್ಕರ್ ಸ್ವಾಗತಿಸಿ, ವಿದ್ಯಾರ್ಥಿನಿ ಅಶ್ವತಿ ವಂದಿಸಿದರು. ಕೃಷ್ಣ ಕಿರಣ ವರದಿ ವಾಚಿಸಿದರು. ಅನುಷ ಮತ್ತು ಅರ್ಪಿತ ಕಾರ್ಯಕ್ರಮ ನಿರೂಪಿಸಿದರು.
Aug 16, 2011
ಸ್ವಾತಂತ್ರ್ಯ ದಿನಾಚರಣೆ
ನಿನ್ನೆ ನಮ್ಮ ಸಂಸ್ಥೆಗಳಲ್ಲಿ ಜರಗಿದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಸ್ವಾತಂತ್ರ್ಯ ಕುರಿತಾದ ಭಾಷಣಗಳನ್ನು ಮಾಡಿದರು. ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿಹಿತ್ತಿಲು, ಕುಂಬಳೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷ ಕೇಶವ ಪ್ರಸಾದ್ ನಾಣಿಹಿತ್ತಿಲು, ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ಭಟ್ ಅಮ್ಮಂಕಲ್ಲು, ಶಾಲಾ ಆಡಳಿತ ಮಂಡಳಿ ಸದಸ್ಯ ಶಾಮರಾಜ್ ದೊಡ್ಡಮಾಣಿ, ಕೃಷ್ಣಮೂರ್ತಿ ಪುದುಕೋಳಿ, ನಮ್ಮ ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸ್ಮಿತಾ ಜಿ.ಎಲ್ ಸ್ವಾಗತಿಸಿ, ವಿದ್ಯಾರ್ಥಿ ಶ್ರೀಹರಿಶಂಕರ ಶರ್ಮ ಧನ್ಯವಾದ ಸಮರ್ಪಿಸಿದರು. ಮಹೇಶಕೃಷ್ಣ ತೇಜಸ್ವಿ.ಕೆ ಕರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿನಿ ಸ್ಮಿತಾ ಜಿ.ಎಲ್ ಸ್ವಾಗತಿಸಿ, ವಿದ್ಯಾರ್ಥಿ ಶ್ರೀಹರಿಶಂಕರ ಶರ್ಮ ಧನ್ಯವಾದ ಸಮರ್ಪಿಸಿದರು. ಮಹೇಶಕೃಷ್ಣ ತೇಜಸ್ವಿ.ಕೆ ಕರ್ಯಕ್ರಮ ನಿರೂಪಿಸಿದರು.
Aug 15, 2011
ರಕ್ಷಾಬಂಧನ
ಸಹೋದರತ್ವ ಮತ್ತು ಭಾವೈಕ್ಯತೆಯ ಸಂಕೇತವಾಗಿ ರಕ್ಷಾಬಂಧನ ಕಾರ್ಯಕ್ರಮವನ್ನು ೧೩.೦೮.೨೦೧೧ ಶನಿವಾರ ನಮ್ಮ ಸಂಸ್ಥೆಯಲ್ಲಿ ಆಚರಿಸಿದೆವು. ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ಪರಸ್ಪರ ರಾಖಿಗಳನ್ನು ಕಟ್ಟಿ ಕಾರ್ಯಕ್ರಮವನ್ನು ಆರಂಭಿಸಿದರು.
ಕಿರಣ್ ಮಹೇಶ್ ಸ್ವಾಗತಿಸಿ ಶ್ರೀವಲ್ಲಿ ಧನ್ಯವಾದ ಸಮರ್ಪಿಸಿದರು. ಶುಭಲಕ್ಷ್ಮಿ ಯಾಜಿ ಕಾರ್ಯಕ್ರಮ ನಿರೂಪಿಸಿದರು.
Aug 5, 2011
ಚಿಂತನ ಭಾರತೀ
ಮೊನ್ನೆ ಜುಲೈ ೨೯ಕ್ಕೆ ನಮ್ಮಲ್ಲಿ ಅಧ್ಯಾಪಕರಿಗಾಗಿ ವಿಶೇಷ ಕಾರ್ಯಕ್ರಮ ’ಚಿಂತನ ಭಾರತೀ’. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಅನಂತಪುರ ಇವರಿಂದ ಅಧ್ಯಾಪಕರಿಗಾಗಿ ವಿಶೇಷ ತರಬೇತಿ ಏರ್ಪಡಿಸಲಾಗಿತ್ತು. ಬದಿಯಡ್ಕ ಮತ್ತು ನಮ್ಮ ಮುಜುಂಗಾವು ವಿದ್ಯಾಪೀಠಗಳ ಅಧ್ಯಾಪಕರು ತರಬೇತಿಯಲ್ಲಿ ಪಾಲ್ಗೊಂಡರು. ನಿವೃತ್ತ ಶಿಕ್ಷಕ ಕೃಷ್ಣ ಭಟ್ ಉದ್ಘಾಟಿಸಿದರು. ಬದಿಯಡ್ಕ ಭಾರತೀ ವಿದ್ಯಾಪೀಠದ ಪ್ರಧಾನಾಚಾರ್ಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮತ್ತು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಅಧ್ಯಾಪಕರು ಕಾರ್ಯಕ್ರಮದ ಗುಣಾತ್ಮಕ ಫಲಗಳನ್ನು ಪಡೆದುಕೊಂಡರು.
Jul 29, 2011
ಪ್ರತಿಭಾ ಭಾರತೀ
“ಬೆಳೆಯುವ ಹಂತದಲ್ಲಿ ಗುರಿಯ ಕಡೆಗೆ ಅಚಲವಾಗಿ ಸಾಗುವುದು ಮುಖ್ಯ. ಆ ನಿಟ್ಟಿನಲ್ಲಿ ಸಾಗಲು ವಿದ್ಯಾರ್ಥಿಗಳಿಗೆ ಹಲವಾರು ವೇದಿಕೆಗಳಿವೆ. ಹೊಸ ಕಲಿಕಾ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಅವಕಾಶ ಇನ್ನಷ್ಟು ವಿಶಾಲವಾಗಿ ಬೆಳೆಯುತ್ತಿದೆ. ಅವುಗಳನ್ನು ಅನುಕೂಲಕರವಾಗಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು” ಎಂದು ಕಣಿಪುರ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ನಾ.ಚಂಬಲ್ತಿಮಾರ್ ಅಭಿಪ್ರಾಯಪಟ್ಟರು. ಅವರು ೨೮.೦೭.೨೦೧೧ ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವಿದ್ಯಾರ್ಥಿನಿ ಶಿಲ್ಪಾ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವೈಶಾಲಿ ಸ್ವಾಗತಿಸಿ ಕವಿತಾ ವಂದಿಸಿದರು. ಸಂಕೇತ ಮತ್ತು ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರಗಿದವು.
Jul 21, 2011
ಗುರುಪೂರ್ಣಿಮಾ...
ವಿಶಿಷ್ಟವಾಗಿ ಗುರುಪೂರ್ಣಿಮೆಯನ್ನು ಆಚರಿಸುವ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸಿದ್ದೇವೆ. ಮೊನ್ನೆ ಜುಲೈ ೧೫ರಂದು ವಿದ್ಯಾರ್ಥಿಗಳು ಶ್ರೀ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಹಿರಿಯರ, ರಕ್ಷಕರ, ಶಿಕ್ಷಕರ ಕಾಲಿಗೆರಗಿ ನಮಸ್ಕರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ, ಆಡಳಿತ ಮಂಡಳಿ ಸದಸ್ಯರಾದ ಕೆ.ವೆಂಕಟ್ರಮಣ ಭಟ್ ಮತ್ತು ಶ್ಯಾಮರಾಜ್ ದೊಡ್ಡಮಾಣಿ ಮತ್ತಿತರರು ಉಪಸ್ಥಿತರಿದ್ದರು.
Jul 5, 2011
ಪ್ರತಿಭಾ ಭಾರತೀ ಉದ್ಘಾಟನೆ
ನಿವೃತ್ತ ಶಿಕ್ಷಕ, ಸಾಹಿತಿ, ಪುಟಾಣಿಗಳ ಪ್ರೀತಿಯ ಬಳ್ಳಮೂಲೆ ‘ಗೋವಿಂದಣ್ಣ" ನಮ್ಮ ಶಾಲೆಯ ಪ್ರತಿಭಾ ಭಾರತೀ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆಯನ್ನು ಮೊನ್ನೆ ಜುಲೈ ಮೊದಲ ತಾರೀಕಿನಂದು ನೆರವೇರಿಸಿದರು. ವಿದ್ಯಾರ್ಥಿಗಳ ಚಟುವಟಿಕೆಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಪ್ರೀತಾ.ಎಂ ಅಧ್ಯಕ್ಷತೆ ವಹಿಸಿದ್ದರು. ಅಶ್ವತಿ ಸ್ವಾಗತಿಸಿ ಗೌರೀಶ ವಿಶ್ವಾಮಿತ್ರ ವಂದಿಸಿದರು. ಶ್ವೇತಾ.ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರಗಿದವು.
ವಿದ್ಯಾರ್ಥಿನಿ ಸುಪ್ರೀತಾ.ಎಂ ಅಧ್ಯಕ್ಷತೆ ವಹಿಸಿದ್ದರು. ಅಶ್ವತಿ ಸ್ವಾಗತಿಸಿ ಗೌರೀಶ ವಿಶ್ವಾಮಿತ್ರ ವಂದಿಸಿದರು. ಶ್ವೇತಾ.ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರಗಿದವು.
Jun 17, 2011
ಮೊನ್ನೆ ಚುನಾವಣೆ ನಮ್ಮ ಶಾಲಾ ಮಟ್ಟದ್ದು. ವಿದ್ಯಾರ್ಥಿ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ನಡೆದ ಸ್ಪರ್ಧೆಗೆ ಐದು ಮಂದಿ ಅಭ್ಯರ್ಥಿಗಳು ಸ್ಪರ್ಧೆ ಒಡ್ಡಿದ್ದರು. ಫಲಿತಾಂಶದಲ್ಲಿ ಅತ್ಯಧಿಕ ಮತ ಪಡೆದ ಹತ್ತನೇ ತರಗತಿ ವಿದ್ಯಾರ್ಥಿ ಬೆಂಗಳೂರಿನ ಸುಹಾಸ್ ಜಿ.ಕಾಕತ್ಕರ್ ವಿದ್ಯಾರ್ಥಿ ನಾಯಕನಾಗಿಯೂ, ದ್ವಿತೀಯ ಸ್ಥಾನ ಪಡೆದ ಕಿರಣ್ ಮಹೇಶ್ ವಿದ್ಯಾರ್ಥಿ ಉಪನಾಯಕನಾಗಿಯೂ ಆಯ್ಕೆಯಾಗಿದ್ದಾರೆ. ಈ ವರ್ಷದ ಶಾಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುಂದಕ್ಕೊಯ್ಯಲು ಅವರ ಜೊತೆ ಹತ್ತು ಮಂದಿ ವಿದ್ಯಾರ್ಥಿಗಳ ಮಂತ್ರಿ ಮಂಡಲವೂ ಕಾರ್ಯ ನಿರ್ವಹಿಸಲಿದೆ. ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದೇವೆ.
Jun 7, 2011
ವಿಶ್ವ ಪರಿಸರ ದಿನ
ಮೊನ್ನೆ ವಿಶ್ವ ಪರಿಸರ ದಿನ. ಆದರೆ ಭಾನುವಾರವಾದ್ದರಿಂದ ತಾಂತ್ರಿಕ ಕಾರಣಗಳಿಂದಾಗಿ ಆ ದಿನವೇ ಕಾರ್ಯಕ್ರಮ ಆಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ವಿದ್ಯಾರ್ಥಿಗಳೆಲ್ಲ ಆಸಕ್ತಿಯಿಂದ ತಂದ ವಿವಿಧ ಗಿಡಗಳನ್ನು ಪರಸ್ಪರ ಹಂಚಿ ಕಾರ್ಯಕ್ರಮವನ್ನು ಆಚರಿಸಿಕೊಂಡೆವು. ಆಡಳಿತ ಮಂಡಳಿ ಕಾರ್ಯದರ್ಶಿ ಎಚ್.ಎಸ್.ಪ್ರಸಾದ್, ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶಿಕ್ಷಕಿ ಶಿವಕುಮಾರಿ ವೃಕ್ಷಾರೋಪಣಗೈದರು. ಚಿತ್ರಾ ಮಾತಾಶ್ರೀ ಮತ್ತು ಗಾಯತ್ರಿ ಮಾತಾಶ್ರೀ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
Jun 1, 2011
ಸ್ವಾಗತ ಭಾರತೀ...
ಹೊಸ ಅಧ್ಯಯನ ವರ್ಷಕ್ಕೆ ಕಾಲಿರಿಸಿದ್ದೇವೆ. ಇಂದು ಶುಭಾರಂಭ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ಲು ಅವರಿಂದ. ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್ ಅಧ್ಯಕ್ಷತೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ-ಮಾರ್ಗ ಇವರ ಉಪಸ್ಥಿತಿ ಕಾರ್ಯಕ್ರಮದಲ್ಲಿತ್ತು.
ಕುಮಾರಿ ಸುಧಾ ಮತ್ತು ತಂಡದವರಿಂದ ಪ್ರಾರ್ಥನೆ. ಅನುಷಾ ಸ್ವಾಗತ, ಶ್ರೀವಲ್ಲಿ ವಂದನಾರ್ಪಣೆ, ಸುಪ್ರೀತಾ.ಎಂ ಕಾರ್ಯಕ್ರಮ ನಿರೂಪಣೆ ಕಾರ್ಯಕ್ರಮದ ಔಪಚಾರಿಕ ಭಾಗ.
ಮುಂದಿನದ್ದು ಏನಿದ್ದರೂ ಹತ್ತಕ್ಕೆ ಏರುವ ಹೊತ್ತಿನ ಕಾರ್ಯಕ್ರಮಗಳು. ಈ ನಿಟ್ಟಿನಲ್ಲಿ ಶಾಲಾರಂಭವಾಗಿದೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ನಮ್ಮ ಮೊದಲ ತಂಡದ ವಿದ್ಯಾರ್ಥಿಗಳಿಗೆ ಶುಭಾಶಯಗಳು...
ಕುಮಾರಿ ಸುಧಾ ಮತ್ತು ತಂಡದವರಿಂದ ಪ್ರಾರ್ಥನೆ. ಅನುಷಾ ಸ್ವಾಗತ, ಶ್ರೀವಲ್ಲಿ ವಂದನಾರ್ಪಣೆ, ಸುಪ್ರೀತಾ.ಎಂ ಕಾರ್ಯಕ್ರಮ ನಿರೂಪಣೆ ಕಾರ್ಯಕ್ರಮದ ಔಪಚಾರಿಕ ಭಾಗ.
ಮುಂದಿನದ್ದು ಏನಿದ್ದರೂ ಹತ್ತಕ್ಕೆ ಏರುವ ಹೊತ್ತಿನ ಕಾರ್ಯಕ್ರಮಗಳು. ಈ ನಿಟ್ಟಿನಲ್ಲಿ ಶಾಲಾರಂಭವಾಗಿದೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ನಮ್ಮ ಮೊದಲ ತಂಡದ ವಿದ್ಯಾರ್ಥಿಗಳಿಗೆ ಶುಭಾಶಯಗಳು...
May 15, 2011
ಶ್ರೀ ಶಂಕರ ವಸಂತ ವೇದಪಾಠ ಶಿಬಿರ ಸಮಾರೋಪ...
ವೇದ ಮೂರ್ತಿ ಶ್ರೀ ಮಣಿಮುಂಡ ವಿಶ್ವೇಶ್ವರ ಶಾಸ್ತ್ರಿಗಳ ನೇತೃತ್ವದಲ್ಲಿ ಕಳೆದ ಎಪ್ರಿಲ್ ತಿಂಗಳಿನಲ್ಲಿ ಆರಂಭವಾದ ಶ್ರೀ ಶಂಕರ ವಸಂತವೇದ ಪಾಠ ಶಿಬಿರದ ಸಮಾರೋಪ ಕಾರ್ಯಕ್ರಮ ನಿನ್ನೆ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಿತು. ಮುಜುಂಗಾವು ಶ್ರೀ ಕ್ಷೇತ್ರದ ಆಡಳಿತ ಕಾರ್ಯದರ್ಶಿ ಎಂ.ಸುಬ್ರಾಯ ಭಟ್, ಕಾನ-ಮೂಡಕರೆ ಇವರು ವಿಶ್ವೇಶ್ವರ ಶಾಸ್ತ್ರಿಗಳನ್ನು ಗೌರವಿಸಿದರು. ಸಂಸ್ಕೃತ ತರಗತಿಗಳನ್ನು ನಡೆಸಿಕೊಟ್ಟ ಮಂಜೇಶ್ವರ ಶ್ರೀಅನಂತೇಶ್ವರ ದೇವಳದ ಪ್ರೌಢಶಾಲಾ ವಿಭಾಗದ ಸಂಸ್ಕೃತ ಶಿಕ್ಷಕ ನಾರಾಯಣ ಜಿ.ಹೆಗಡೆ ಇವರನ್ನು ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಹಿಳ್ಳೆಮನೆ ಸನ್ಮಾನಿಸಿದರು. ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು.
Mar 31, 2011
ಪ್ರತಿಭಾ ಭಾರತೀ ವಾರ್ಷಿಕ ಕಾರ್ಯಕ್ರಮಗಳ ಸಮಾರೋಪ
ಇಂದು ನಮ್ಮ ಪುಟಾಣಿ ವಿದ್ಯಾರ್ಥಿಗಳಿಗೆ ೨೦೧೦-೧೧ ಅಧ್ಯಯನ ವರ್ಷದ ಕೊನೆಯ ದಿನ. ಪರೀಕ್ಷೆಗಳ ನಂತರ ದೊರೆತ ಅವಿಸ್ಮರಣೀಯ ಕ್ಷಣ. ಈ ನಿಟ್ಟಿನಲ್ಲಿ ಆಯೋಜಿಸಲಾದ ಪ್ರತಿಭಾ ಭಾರತೀ ವಾರ್ಷಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ದೊರೆತ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡರು. ಜೊತೆಯಲ್ಲಿ ಹಿರಿಯರಾದ ಡಾ| ಹರಿಕೃಷ್ಣ ಭರಣ್ಯ, ಮುಖ್ಯೋಪಾಧ್ಯಾಯ ಶಾಮ ಭಟ್, ಆಡಳಿತ ಮಂಡಳಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಇವರಿಂದ ಹಿತವಚನಗಳ ನುಡಿ. ಮುಂದಿನ ಅಧ್ಯಯನ ವರ್ಷಕ್ಕೆ ಹೊಸ ಉತ್ಸಾಹದಿಂದ ಬರುತ್ತೇವೆ ಎಂಬ ವಿಶ್ವಾಸದೊಂದಿಗೆ ವಿದ್ಯಾರ್ಥಿಗಳು ಮನೆ, ಅಜ್ಜನಮನೆಗಳ ಕಡೆಗೆ ಹೊರಟಿದ್ದಾರೆ, ಮುಂದಿನ ದಿನಗಳನ್ನು ಮಾವಿನ ಮರದ ಅಡಿಯಲ್ಲಿ, ಗೇರು ಹಣ್ಣಿನ ತೋಪಿನಲ್ಲಿ... ಆಟವಾಡುತ್ತಾ ಕಳೆಯುವುದಕ್ಕಾಗಿ, ಅವರಿಗೆಲ್ಲ ನಮ್ಮ ಶುಭಾಶಯಗಳು.
ಈ ನಡುವೆ ಪುಟ್ಟ ಕಿವಿ ಮಾತು, ಮುಂದಿನ ವರ್ಷದ ತಯಾರಿಗಾಗಿ ನಡುನಡುವೆ ನಾವು ಪೂರ್ವ ತಯಾರಿ ತರಗತಿಗಳನ್ನು ಇಟ್ಟುಕೊಳ್ಳುವವರಿದ್ದೇವೆ, ನೆನಪಿರಲಿ. ಮುಂದಿನ ವರ್ಷ ನಾವೂ ಕೂಡಾ ಹತ್ತರ ಕಡೆಗೆ ಹತ್ತುವವರು...
ಈ ನಡುವೆ ಪುಟ್ಟ ಕಿವಿ ಮಾತು, ಮುಂದಿನ ವರ್ಷದ ತಯಾರಿಗಾಗಿ ನಡುನಡುವೆ ನಾವು ಪೂರ್ವ ತಯಾರಿ ತರಗತಿಗಳನ್ನು ಇಟ್ಟುಕೊಳ್ಳುವವರಿದ್ದೇವೆ, ನೆನಪಿರಲಿ. ಮುಂದಿನ ವರ್ಷ ನಾವೂ ಕೂಡಾ ಹತ್ತರ ಕಡೆಗೆ ಹತ್ತುವವರು...
Mar 2, 2011
ಯಕ್ಷಗಾನ - ಭರಪೂರ ಮನರಂಜನೆ
ನಿನ್ನೆ ರಾತ್ರಿ ವಿದ್ಯಾಲಯ ಪರಿಸರದಲ್ಲಿ ನಡೆದ ಗಜೇಂದ್ರ ಮೋಕ್ಷ - ಶ್ರೀನಿವಾಸ ಕಲ್ಯಾಣ ನೆರೆದ ಸಭಿಕರಿಗೆ ಭರಪೂರ ಮನರಂಜನೆ ಒದಗಿಸಿತು. ಶ್ರೀ ರಾಮಚಂದ್ರಕೃಪಾಪೋಷಿತ ಯಕ್ಷಗಾನ ಮಂಡಳಿ, ಹೊಸನಗರ ನಡೆಸಿದ ಈ ಬಯಲಾಟಕ್ಕೆ ಸಾವಿರಕ್ಕೂ ಮಿಕ್ಕಿ ಸಭ್ಯ ಜನರು ಸೇರಿದ್ದು ಮುಜುಂಗಾವು ಪರಿಸರದಲ್ಲಿ ಹೊಸ ದಾಖಲೆ. ಗಜೇಂದ್ರ, ಮಕರ ಪ್ರವೇಶ, ಪದ್ಮಾವತಿಯ ಶೃಂಗಾರ ಲಾಸ್ಯ, ಕಿರಾತ-ಸುದೇವರ ಸಂಭಾಷಣೆ ಸೇರಿದ್ದ ಆಸ್ವಾದಕರ ಮನಸೂರೆಗೊಂಡಿತು. ಪ್ರತಿಭಾ ಭಾರತಿಗೆ ಫೋಟೋ ಒದಗಿಸಿಕೊಟ್ಟ ಹರೀಶ್ ಹಳೆಮನೆ ಇವರಿಗೆ ಧನ್ಯವಾದಗಳು.
Subscribe to:
Posts (Atom)


































